ಇತಿಹಾಸ

ಸಂಸ್ಥೆಯ ಪ್ರೊಫೈಲ್

ಕರ್ನಾಟಕ ಘನ ಸರ್ಕಾರದ ಆದೇಶ ಸಂಖ್ಯೆ: ಇಡಿ/174/ಯೋಯೋಕ 2007 ದಿ: 23-07-2007 ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಐತಿಹಾಸಿಕ ಸ್ಥಳವಾದ ಗಜೇಂದ್ರಗಡದಲ್ಲಿ ಗ್ರಾಮೀಣ ಪ್ರದೇಶ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನೀಯರಿಗೆ ತಾಂತ್ರಿಕ ಶಿಕ್ಷಣ ದೊರೆಯುವಂತೆ ಮಾಡುವ ಮಹತ್ವಾಕಾಂಕ್ಷೆಯಿಂದ ಘನ ಸರ್ಕಾರವು ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗೆ ಮಂಜೂರಾತಿ ನೀಡಲಾಯಿತು.

ಅಖಿಲ ಭಾರತ ತಾಂತ್ರಿಕ ಪರಿಷತ್ ನವದೆಹಲಿ ಇವರ ಪತ್ರಸಂಖ್ಯೆ:770-53-220/ ಎನ್ಡಿಐಪಿ /2007 / ಎಸ್ಡಬ್ಲ್ಯೂಆರ್ಓ ದಿ: 01-05-2008 ರನ್ವಯ 2008-09ನೇ ಶೈಕ್ಷಣಿಕ ವರ್ಷದಿಂದ ಪ್ರತಿ ಕೋರ್ಸಿಗೆ 40 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಈ ಸಂಸ್ಥೆಗೆ ಅನುಮತಿ ನೀಡಲಾಯಿತು. ಈ ಕೆಳಗಿನ 03 ವರ್ಷದ ಡಿಪ್ಲೋಮಾ ಕೋರ್ಸುಗಳನ್ನು ಸಂಸ್ಥೆಯಲ್ಲಿ ಬೋಧಿಸಲಾಗುತ್ತದೆ.

  • 1. ಗಣಕಯಂತ್ರ ವಿಭಾಗ
  • 2. ದೂರಸಂಪರ್ಕ ವಿಭಾಗ
  • 3. ಕಾಮಗಾರಿ ವಿಭಾಗ.
  • 4. ಯಾಂತ್ರಿಕ ವಿಭಾಗ

2009-10ನೇ ಶೈಕ್ಷಣಿಕ ವರ್ಷದಿಂದ ಅಖಿಲ ಭಾರತ ತಾಂತ್ರಿಕ ಪರಿಷತ್ ನವದೆಹಲಿ ಇವರ ಪತ್ರಸಂಖ್ಯೆ:770-53-220/ಎನ್ಡಿಐಪಿ/2007/ಎಸ್ಡಬ್ಲ್ಯೂಆರ್ಓ ದಿ: 01-06-2009 ರನ್ವಯ ಪ್ರತಿ ಕೋರ್ಸಿಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು 40 ರಿಂದ 60ಕ್ಕೆ ಹೆಚ್ಚಿಸಲಾಯಿತು.

ಈ ಸಂಸ್ಥೆಯು 5.04 ಎಕರೆ ವಿಸ್ತ್ರೀರ್ಣ ಜಮೀನಿನಲ್ಲಿ ಸುಸಜ್ಜಿತ ಕಟ್ಟಡ, ಪ್ರಯೋಗಾಲಯಗಳು ಮತ್ತು ಕಾರ್ಯಾಗಾರವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳ ಸಂವಹನ ಕಲೆ ಹೆಚ್ಚಿಸಲು ಭಾಷಾ ಪ್ರಯೋಗಾಲಯವನ್ನು ಸ್ಥಾಪಿಸಿರುವುದು ಈ ಸಂಸ್ಥೆಯ ಹೆಗ್ಗಳಿಕೆ.

ಈ ಸಂಸ್ಥೆಯಲ್ಲಿ 04 ಪ್ರತ್ಯೇಕ ಗಣಕಯಂತ್ರ ಪ್ರಯೋಗಾಲಯಗಳು ಸ್ಥಾಪನೆಯಾಗಿದ್ದು, ಅತೀ ಹೆಚ್ಚು ವೇಗದ ಅಂತರ್ಜಾಲ ಸಂಪರ್ಕವನ್ನು ಹೊಂದಿರುತ್ತದೆ. ಸಂಸ್ಥೆಯಲ್ಲಿ ಒಟ್ಟು 70 ಗಣಕಯಂತ್ರಗಳು ಕಾರ್ಯನಿರ್ವಹಿಸುತ್ತಿವೆ.

ಈ ಸಂಸ್ಥೆಯಲ್ಲಿ ಉದ್ಯೋಗ ಮತ್ತು ತರಬೇತಿ ಘಟಕ ಸ್ಥಾಪನೆಯಾಗಿದ್ದು, ನಮ್ಮ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಮಟ್ಟದ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂಸ್ಥೆಯ ಹಿರಿಮೆ ಹೆಚ್ಚಿಸಿದೆ. ಇಲ್ಲಿಯವರೆಗೂ 08 ಬ್ಯಾಚ್ ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿ ಉನ್ನತ ಶಿಕ್ಷಣ ಮತ್ತು ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆದಿರುತ್ತಾರೆ. ಕೆಲವು ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳು ಪ್ರತಿಷ್ಟಿತ ಸಂಸ್ಥೆಗಳಾದ ORACLE ಮತ್ತು (GOGALE)ಗೂಗಲ್ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಈ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದೆ.

ಪ್ರತಿ ವರ್ಷ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈ ಕೆಳಗಿನ ವಿಷಯಗಳ ಮೇಲೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಸಲಾಗುತ್ತದೆ.

  • 1. ನಾಯಕತ್ವ .
  • 2. ತಂಡ ರಚನೆ
  • 3. ಸಕಾರಾತ್ಮಕ ಚಿಂತನೆ
  • 4. ಉತ್ತೇಜನಗೊಳಿಸುವಿಕೆ
  • 5. ಸಂದರ್ಶನ ಕಲೆ
  • 6. ಉದ್ಯಮಿ ತರಬೇತಿ

ಪ್ರತಿಷ್ಠಿತ ಕೈಗಾರಿಕೆಗಳಿಂದ ತಜ್ಞರನ್ನು ಸಂಸ್ಥೆಗೆ ಆಹ್ವಾನಿಸಿ ವಿವಿಧ ವಿಷಯಗಳ ಮೇಲೆ ಅತಿಥಿ ಉಪನ್ಯಾಸ ನೇರವೇರಿಸಲಾಗುವುದು.