ಶಿಷ್ಯವೇತನ ವಿಭಾಗ

ಕರ್ನಾಟಕ ಸರ್ಕಾರವು ಸಮಾಜದ ವಿವಿಧ ಪ್ರವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಶಿಷ್ಯವೇತನ ಮಂಜೂರು ಮಾಡುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ, ಘನ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಶಿಷ್ಯವೇತನವನ್ನು ವಿತರಿಸಲಾಗುತ್ತದೆ. ಅಲ್ಪ ಸಂಖ್ಯಾತ ವರ್ಗದ ( ಮುಸ್ಲಿಂ, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್, ಸಿಖ್, ಜೈನ್ ಇತ್ಯಾದಿ) ವಿದ್ಯಾರ್ಥಿಗಳಿಗೆ ಘನ ಸರ್ಕಾರವು ಅಲ್ಪ ಸಂಖ್ಯಾತರ ಇಲಾಖೆಯ ಮೂಲಕ ಶಿಷ್ಯವೇತನವನ್ನು ಮಂಜೂರು ಮಾಡಲಾಗುತ್ತದೆ. ಪ್ರವರ್ಗ 2ಎ,3ಎ,3ಬಿ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಘನ ಸರ್ಕಾರವು ಹಿಂದುಳಿದ ವರ್ಗಗಗಳ ಇಲಾಖೆಯ ಮುಖಾಂತರ ವಿದ್ಯಾಸಿರಿ ಶಿಷ್ಯವೇತನವನ್ನು ವಿತರಿಸಲಾಗುತ್ತದೆ.

ಸಂಸ್ಥೆಯು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ವಿತರಿಸಿದ ಶಿಷ್ಯವೇತನದ ವಿವರಗಳು ಈ ಕೆಳಗಿನಂತಿದೆ.

ಅಲ್ಪಸಂಖ್ಯಾತ ಮತ್ತು ಹಿಂದುಳಿದ ಪ್ರವರ್ಗದ ವಿದ್ಯಾರ್ಥಿಗಳ ವಿವರ
ಕ್ರ.ಸಂ ಮಂಜೂರಾತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಮೊತ್ತ ರೂ.
01 2008-09 112 33600/-
02 2009-10 127 118571/-
03 2010-11 266 79800/-
04 2011-12 107 32100/-
05 2012-13 82 131200/-
06 2013-14 139 311360/-
07 2014-15 135 551530/-
08 2015-16 173 457100/-
09 2016-17 176 456800/-
10 2017-18 160 598500/-
ಒಟ್ಟು 27,70,561/-

ಪ.ಜಾ/ಪ.ಪಂ ವಿದ್ಯಾರ್ಥಿಗಳ ವಿವರ
ಕ್ರ.ಸಂ ಮಂಜೂರಾತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಮೊತ್ತ ರೂ.
01 2008-09 114 338357/-
05 2012-13 72 192960/-
06 2013-14 41 44100/-
07 2014-15 13 52920/-
08 2015-16 135 457100/-
09 2016-17 12 27600/-
10 2017-18 39 159380/-
ಒಟ್ಟು 8,15,317/-

ಸರ್ಕಾರೇತರ ಸಂಸ್ಥೆಗಳು ಮಂಜೂರು ಮಾಡುವ ಶಿಷ್ಯವೇತನಗಳು

ಈ ಕೆಳಗಿನ ಸರ್ಕಾರೇತರ ಸಂಸ್ಥೆಗಳು ಸಮಾಜದ ಎಲ್ಲ ಪ್ರವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಪ್ರತಿಭೆಯನ್ನಷ್ಟೇ ಮಾನದಂಡವನ್ನಾಗಿಟ್ಟುಕೊಂಡು ಶಿಷ್ಯವೇತವನ್ನು ಸದರಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಅಂತಹ ಸಂಸ್ಥೆಗಳ ವಿವರ ಈ ಕೆಳಗಿನಂತಿದೆ.

  1. ವಿದ್ಯಾ ಪೋಷಕ ಶಿಷ್ಯವೇತನ
  2. ಸೀತಾರಾಮ ಜಿಂದಾಲ್ ಶಿಷ್ಯವೇತನ
  3. ವಿದ್ಯಾಸಾರಥಿ ಶಿಷ್ಯವೇತನ