ತರಬೇತಿ ಮತ್ತು ಉದ್ಯೋಗ ಮಾಹಿತಿ ಘಟಕ

ಈ ಸಂಸ್ಥೆಯಲ್ಲಿ ತರಬೇತಿ ಮತ್ತು ಉದ್ಯೋಗ ಮಾಹಿತಿ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕವು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಮಂತ್ರಿತ ಕೈಗಾರಿಕೋದ್ಯಮಿಗಳಿಂದ ಮತ್ತು ಜಿಲ್ಲಾ ಕೈಗಾರಿಕೆ ಕೇಂದ್ರ ಗದಗ ಇವರ ಸಹಯೋಗದಿಂದ ಅಗತ್ಯವಾದ ತರಬೇತಿಗಳನ್ನು ಆಯೋಜಿಸುತ್ತದೆ. ಸದರಿ ಘಟಕವು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದೊಂದಿಗೆ ಉದ್ಯೋಗದ ಅವಕಾಶಗಳ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳು ಉದ್ಯೋಗ ಪಡೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಈ ಕೆಳಗಿನ ಕೈಗಾರಿಕೆಗಳು ವಿವಿಧ ಡಿಪ್ಲೋಮಾ ಕೋರ್ಸುಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉದ್ಯೋಗ ನೀಡಿರುತ್ತಾರೆ.

  1. ಟಿ. ವಿ.ಎಸ್. ಮೋಟರ್ಸ್ ಲಿಮಿಟೆಡ್ ಮೈಸೂರು ಜಿಲ್ಲೆ, ಕರ್ನಾಟಕ
  2. ಜಿಂದಲ್ ಸ್ಟೀಲ್ವ ವರ್ಕ್ಸ್ ಸಮೂಹ ಸಂಸ್ಥೆ ಲಿಮಿಟೆಡ್ ಬಳ್ಳಾರಿ ಜಿಲ್ಲೆ, ಕರ್ನಾಟಕ
  3. ಶಾಂತಲಾ ಪಾವರ್ ಲಿಮಿಟೆಡ್ ಹುಬ್ಬಳ್ಳಿ, ಕರ್ನಾಟಕ
  4. ರಿಲೈನ್ಸ್ ಜಿಯೋ ಸರ್ವೀಸ್ ಲಿಮಿಟೆಡ್ ಬೆಂಗಳೂರು, ಕರ್ನಾಟಕ
  5. ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು, ಕರ್ನಾಟಕ
ಸಂಸ್ಥೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಉದ್ಯೋಗ ಪಡೆದ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅಂಕಿ -ಸಂಖ್ಯೆಗಳು ಈ ಕೆಳಗಿನಂತಿದೆ.
ವರ್ಷ ಅಂತಿಮ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ಉದ್ಯೋಗ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಉನ್ನತ ವ್ಯಾಸಂಗ ಮಾಡಿರುವ/ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ
2010-11 75 61 14
2011-12 93 70 23
2012-13 122 90 32
2013-14 150 100 50
2014-15 170 95 65
2015-16 168 98 70
2016-17 122 95 27
2017-18 101 80 21