ರಾಷ್ಟ್ರೀಯ ಸೇವಾ ಯೋಜನೆ

ರಾಜ್ಯ ಮಟ್ಟದ ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳು ಇವರ ಪತ್ರಸಂಖ್ಯೆ: ಡಿಟಿಇ/ಎನ್ಎಸ್ಎಸ್/ಸ್ವ-ಆರ್ಥಿಕ ಘಟಕ/01/2015/226 ದಿ: 30-05-2015 ರನ್ವಯ ಸಂಸ್ಥೆಯಲ್ಲಿ 2015-16ನೇ ಶೈಕ್ಷಣಿಕ ವರ್ಷದಿಂದ ಸ್ವ-ಆರ್ಥಿಕ ರಾಷ್ಟ್ರೀಯ ಸೇವಾ ಯೋಜನೆ ಘಟಕವನ್ನು ಸ್ಥಾಪಿಸಲಾಯಿತು.

ರಾಜ್ಯ ಮಟ್ಟದ ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳು ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರ ನಿರ್ದೇಶನದಂತೆ ಸಂಸ್ಥೆಯಲ್ಲಿ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಎಲ್ಲ ಕಾರ್ಯಕ್ರಮಗಳು ಪ್ರತಿ ವರ್ಷ ನಿಗದಿತ ದಿನಾಂಕಗಳಂದು ಜರುಗುತ್ತವೆ.

 1. ಸದ್ಭಾವನಾ ದಿನಾಚರಣೆ
 2. ಇಂಜನೀಯರ್ಸ್ ಡೇ
 3. ಜಾಗೃತಿ ಸಪ್ತಾಹ ಆಚರಣೆ
 4. ರಾಷ್ಟ್ರೀಯ ಏಕತಾ ದಿವಸ
 5. ಸ್ವಾಮಿ ವಿವೇಕಾನಂದ ಜಯಂತಿ
 6. ಸಂವಿಧಾನ ದಿನಾಚರಣೆ
 7. ಆರೋಗ್ಯ ಶಿಬಿರ

2015-16ನೇ ಸಾಲಿನಿಂದ ಸ್ವ-ಆರ್ಥಿಕ ಘಟಕವನ್ನು ಯಶಸ್ವಿಯಾಗಿ ನಿರ್ವಹಿಸಿ ರಾಜ್ಯ ಮಟ್ಟದ ಎನ್.ಎಸ್.ಎಸ್ ಘಟಕ ಸಂಯೋಜನಾಧಿಕಾರಿಗಳಿಗೆ ಸಲ್ಲಿಸಿದ ವರದಿಯನ್ನು ಪರಿಗಣಿಸಿ ನಮ್ಮ ಸಂಸ್ಥೆಯ ಸ್ವ-ಆರ್ಥಿಕ ಘಟಕವನ್ನು 2018-19ನೇ ಸಾಲಿನಿಂದ ಅನುದಾನಿತ ಘಟಕವನ್ನಾಗಿ ಪರಿವರ್ತಿಸಲಾಯಿತು. ಈ ಪರಿವರ್ತನೆಯಿಂದ ನಮ್ಮ ಸಂಸ್ಥೆಯ ಎನ್.ಎಸ್.ಎಸ್. ಘಟಕವು ರಾಜ್ಯ ಎನ್.ಎಸ್.ಎಸ್. ಘಟಕ ತಾಂತ್ರಿಕ ಶಿಕ್ಷಣ ಇಲಾಖೆ ಇವರಿಂದ ದೈನಂದಿನ ಚಟುವಟಿಕೆಗಳಿಗಾಗಿ ಮತ್ತು ವಿಶೇಷ ಶಿಬಿರಕ್ಕಾಗಿ ಪತ್ರಸಂಖ್ಯೆ: ಡಿಟಿಇ/ಎನ್.ಎಸ್.ಎಸ್/21/ಎನ್ಯು/2017-18 ದಿ: 05-03-2018 ರನ್ವಯ ರೂ. 37,200/- ಅನುದಾನವನ್ನು ಪಡೆಯಲಾಯಿತು.

2015-16 ರಿಂದ ಇಲ್ಲಿಯವರೆಗೂ ರಾಷ್ಟ್ರೀಯ ಸೇವಾ ಯೋಜನೆಗೆ ಸ್ವಯಂ ಸೇವಕರಾಗಿ ಹೆಸರು ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆಯ ವಿವರ ಈ ಕೆಳಗಿನಂತಿದೆ.

ಕ್ರ.ಸಂ ವರ್ಷ ಸ್ವಯಂ ಸೇವಕರ ಸಂಖ್ಯೆ
01 2015-16 140
02 2016-17 130
03 2017-18 120
04 2018-19 100

  ವಿಶೇಷ ಚಟುವಟಿಕೆಗಳು:

  ರಾಷ್ಟ್ರೀಯ ಸೇವಾ ಯೋಜನೆಯಡಿ ನಮ್ಮ ಸಂಸ್ಥೆಯಲ್ಲಿ ದೈನಂದಿನ ಚಟುವಟಿಕೆಗಳೊಂದಿಗೆ ಈ ಕೆಳಗಿನ ವಿಶೇಷ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳಲಾಗಿದೆ

 1. ಆರೋಗ್ಯ ತಪಾಸಣಾ ಪತ್ರ:
  • ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸ್ವಾಥ್ಯವನ್ನು ಕಾಪಾಡುವ ದೃಷ್ಟಿಯಿಂದ, ಎಲ್ಲರಿಗೂ ಆರೋಗ್ಯ ತಪಾಸಣಾ ಪತ್ರವನ್ನು ವಿತರಿಸಲಾಗಿದೆ. ಈ ಪತ್ರದಲ್ಲಿ ವಿದ್ಯಾರ್ಥಿಯ ಆರೋಗ್ಯದ ವಿವರಗಳು ಮತ್ತು ತಜ್ಞ ವೈದ್ಯರ ಸಲಹೆಗಳು ದಾಖಲಿಸಿಲಾಗಿದೆ.
 2. ಆರೋಗ್ಯ ಶಿಬಿರ
  • ಈ ಶಿಬಿರದಲ್ಲಿ ವಿದ್ಯಾರ್ಥಿಗಳ ರಕ್ತದ ಗುಂಪು ಮತ್ತು ಹಿಮೋಗ್ಲೊಬಿನ್ ಪ್ರಮಾಣ ಇನ್ನು ಹಲವಾರು ಮಹತ್ವದ ವಿಷಯಗಳನ್ನು ತಪಾಸಣೆ ನಡೆಸಿ ತಜ್ಞ ವೈದ್ಯರು ಸೂಕ್ತ ಸಲಹೆ ನೀಡುತ್ತಾರೆ.
 3. ರಕ್ತದಾನ ಶಿಬಿರ
  • ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹುಬ್ಬಳ್ಳಿ ಮತ್ತು ಗದಗ ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿಯವರೆಗೂ ವಿದ್ಯಾರ್ಥಿಗಳಿಂದ ಮತ್ತು ಎಲ್ಲ ಸಿಬ್ಬಂದಿವರ್ಗದವರಿಂದ ಸುಮಾರು 200 ಲೀಟರ್ನಷ್ಟು ರಕ್ತ ಸಂಗ್ರಹಿಸಿ ಆಸ್ಪತ್ರೆಗಳಿಗೆ ನೀಡಲಾಗಿದೆ.
 4. ವಿಶ್ವ ಏಡ್ಸ್ ದಿನಾಚರಣೆ
  • ಪ್ರತಿ ವರ್ಷ ಡಿಸೆಂಬರ್ನಲ್ಲಿ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರನ್ನು ಸಂಸ್ಥೆಗೆ ಆಮಂತ್ರಿಸಿ ಏಡ್ಸ್ ರೋಗದ ಕುರಿತು ವೈದ್ಯಕೀಯ ಉಪನ್ಯಾಸ ಏರ್ಪಡಿಸಲಾಗುತ್ತದೆ.
 5. ಸಸಿ ನೆಡುವಿಕೆ
  • ಸಂಸ್ಥೆಯ ಆವರಣದಲ್ಲಿ ಅರಣ್ಯ ಇಲಾಖೆ ಮತ್ತು ಸ್ಥಳೀಯ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಸುಮಾರು 100 ಗಿಡಗಳನ್ನು ನೆಡಲಾಗಿದೆ. ಈ ಯೋಜನೆಯಿಂದ ನಮ್ಮ ಸಂಸ್ಥೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ.
 6. ಸ್ವಚ್ಛ ಭಾರತ ಅಭಿಯಾನ
  • ಸನ್ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ ಇವರು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ನಮ್ಮ ವಿದ್ಯಾರ್ಥಿಗಳು ರಾಷ್ಟ್ರೀಯ ಹಬ್ಬದ ದಿನಗಳಂದು, ರಾಷ್ಟ್ರ ನಾಯಕರ ಜಯಂತಿಗಳಂದು ಸಂಸ್ಥೆಯ ಆವರಣವನ್ನು, ತರಗತಿಗಳನ್ನು, ಪ್ರಯೋಗಾಲಯಗಳನ್ನು, ಕಾರ್ಯಾಗಾರಗಳನ್ನು ಮತ್ತು ಉಳಿದ ಎಲ್ಲ ಕೊಠಡಿಗಳನ್ನು ಸ್ವಚ್ಛ ಮಾಡುತ್ತಾರೆ. ನಮ್ಮ ಆವರಣವು ಸಂಪೂರ್ಣ ಹಸಿರು ಮತ್ತು ಸ್ವಚ್ಛತೆಯಿಂದ ಕೂಡಿದೆಯೆಂದು ತಿಳಿಸಲು ಹೆಮ್ಮೆಯೆನಿಸುತ್ತದೆ.