ಯಾಂತ್ರಿಕ ವಿಭಾಗ

ಯಾಂತ್ರಿಕ ವಿಭಾಗವು ಗ್ರಾಮೀಣ ಪ್ರದೇಶದ ಅಗತ್ಯತೆಗಳನ್ನು ಪೂರೈಸುವ ಜನಪ್ರಿಯ ಇಂಜನೀಯರಿಂಗ್ ವಿಭಾಗವಾಗಿರುತ್ತದೆ. ಈ ವಿಭಾಗವು ಲಘು ಮತ್ತು ಭಾರವಾದ ವಾಹನಗಳ ಯಂತ್ರೋಪಕರಣಗಳ ಕಾರ್ಯವಿಧಾನ ಮತ್ತು ತಯಾರಿಕೆಯನ್ನು ಒಳಗೊಂಡಿರುತ್ತದೆ. ಈ ವಿಭಾಗವು ಕೃಷಿಗೆ ಬೇಕಾಗುವ ಯಂತ್ರೋಪಕರಣಗಳನ್ನು ಉತ್ಪಾದಿಸುವ ಮಾಹಿತಿಯನ್ನು ಹೊಂದಿರುತ್ತದೆ.

ವಿಸ್ತಾರ (Scope)
  • ಯಾಂತ್ರಿಕ ವಿಭಾಗವು ಜನಸಾಮಾನ್ಯರ ಅಗತ್ಯಗಳಾದ ವಿದ್ಯುತ್ ಕ್ಷೇತ್ರ, ಏರ್ ಕಂಡೀಷನರ್ ಮತ್ತು ಏರ್ ಕೂಲರ್ ಕ್ಷೇತ್ರಗಳನ್ನೊಳಗೊಂಡಿದೆ. ಈ ವಿಭಾಗವು ನಿರ್ಮಾಣ ಉದ್ಯಮ, ಚಾಲಿತ ಯಂತ್ರಗಳ ಉದ್ಯಮ ಮತ್ತು ವಿಮಾನಗಳ ತಯಾರಿಕೆ ಕ್ಷೇತ್ರದವರಿಗೆ ವಿಸ್ತಾರಗೊಂಡಿದೆ.
ದೂರದೃಷ್ಟಿ (Vision)
  • ವಿದ್ಯಾರ್ಥಿಗಳನ್ನು ಯಾಂತ್ರಿಕ ಮತ್ತು ಸಂಬಂಧಿತ ಕೈಗಾರಿಕೆಗಳಿಗೆ ಬೇಕಾಗುವ ವೃತ್ತಿಪರ ಯಾಂತ್ರಿಕ ಅಭಿಯಂತರರನ್ನಾಗಿ ಸಿದ್ಧಪಡಿಸುವುದು.
ಧ್ಯೇಯ (Mission)
  • ಯಾಂತ್ರಿಕ ವಿಭಾಗದ ಕೈಗಾರಿಕೆಗಳಿಗೆ ಬೇಕಾಗುವ ಮತ್ತು ಉನ್ನತ ವ್ಯಾಸಂಗವನ್ನು ಉತ್ತೇಜಿಸುವ ಅಭಿಯಂತರರನ್ನು ತಯಾರು ಮಾಡಲು ಬೇಕಾಗುವ ಕಲಿಕಾ ವಿಧಾನಗಳನ್ನು ಒದಗಿಸುವುದು.
  • ಬದಲಾಗುತ್ತಿರುವ ತಂತ್ರಜ್ಞಾನದ ಸವಾಲುಗಳನ್ನು ಅರಿತುಕೊಳ್ಳುವ, ತಂಡದಲ್ಲಿ ಕಾರ್ಯನಿರ್ವಹಿಸುವ ಮತ್ತು ಉತ್ತಮ ಸಂವಹನ ಕಲೆ ಹೊಂದಿ ವೃತ್ತಿಯಲ್ಲಿ ಯಶಸ್ಸು ಹೊಂದುವ ವಾತಾವರಣದ ನಿರ್ಮಾಣ.
  • ವೃತ್ತಿಯ ಆದರ್ಶಗಳನ್ನು ಮತ್ತು ಪರಿಸರ ಕಾಳಜಿಯನ್ನು ಹೊಂದಿ ಫಲಾನುಭವಿಗಳ/ಪಾಲುದಾರರ ಶ್ರೇಯೊಭಿವೃದ್ಧಿಗೆ ಶ್ರಮಿಸುವುದು.