ಡಿಪ್ಲೋಮಾ ಪರೀಕ್ಷೆಗಳು

ತಾಂತ್ರಿಕ ಪರೀಕ್ಷಾ ಮಂಡಳಿಯ ಕಾರ್ಯದರ್ಶಿಗಳು ಡಿಪ್ಲೋಮಾ ಪರೀಕ್ಷೆಗಳ ಸಂಪೂರ್ಣ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನು ನಿಭಾಯಿಸುತ್ತಾರೆ. ತಾಂತ್ರಿಕ ಪರೀಕ್ಷಾ ಮಂಡಳಿ ಪ್ರತಿ ವರ್ಷದಲ್ಲಿ 02 ಅವಧಿಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತಾರೆ. ಅವುಗಳ ವಿವರ ಈ ಕೆಳಗಿನಂತಿದೆ.

  1. 1, 3 ಮತ್ತು 5ನೇ ಸೆಮಿಸ್ಟರ್ (ಬೆಸ ಸೆಮಿಸ್ಟರ್) : ಬಹುತೇಕ ನವಂಬರ್/ಡಿಸೆಂಬರ್ ತಿಂಗಳಲ್ಲಿ
  2. 2, 4 ಮತ್ತು 6ನೇ ಸೆಮಿಸ್ಟರ್ ( ಸಮ ಸೆಮಿಸ್ಟರ್) : ಬಹುತೇಕ ಏಪ್ರೀಲ್/ಮೇ ತಿಂಗಳಲ್ಲಿ

ತಾಂತ್ರಿಕ ಪರೀಕ್ಷಾ ಮಂಡಳಿ ಡಿಪ್ಲೋಮಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಕೆಳಗಿನ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ. ಅವುಗಳ ವಿವರ ಈ ಕೆಳಗಿನಂತಿದೆ.

  1. ಅಂಕಪಟ್ಟಿಗಳು (ಪ್ರತಿ ಸೆಮಿಸ್ಟರ್ಗೆ ಪ್ರತಿ ಅವಧಿಗೆ ಪ್ರತ್ಯೇಕ ಅಂಕಪಟ್ಟಿಗಳು)
  2. ಡಿಪ್ಲೋಮಾ ಪದವಿ ಪ್ರಮಾಣಪತ್ರ ( 1 ರಿಂದ 6 ನೇ ಸೆಮಿಸ್ಟರ್ನ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ)
  3. ಅಂಕಪಟ್ಟಿಯ ದ್ವಿಪ್ರತಿ. ( ಡುಪ್ಲಿಕೇಟ್ ಅಂಕಪಟ್ಟಿ) (ವಿದ್ಯಾರ್ಥಿಯು ಮೂಲ ಅಂಕಪಟ್ಟಿಯನ್ನು ಕಳೆದುಕೊಂಡಾಗ ಮಾತ್ರ)

ಸೂಚನೆ:
  1. ತಾಂತ್ರಿಕ ಪರೀಕ್ಷಾ ಮಂಡಳಿಯು ಪರೀಕ್ಷಾ ನಿಯಮಗಳನ್ನು ಮತ್ತು ಮಾರ್ಗಸೂಚಿಗಳನ್ನು ಸರ್ಕಾರದ ಆದೇಶದಂತೆ ಪ್ರತಿ ವರ್ಷ ಪರಿಷ್ಕರಿಸುತ್ತದೆ.
  2. ತಾಂತ್ರಿಕ ಪರೀಕ್ಷಾ ಮಂಡಳಿಯು ಸರ್ಕಾರದ ಆದೇಶದನ್ವಯ ಪರೀಕ್ಷಾ ಶುಲ್ಕವನ್ನು ನಿಗದಿಗೊಳಿಸಿರುತ್ತದೆ
  3. ತಾಂತ್ರಿಕ ಪರೀಕ್ಷಾ ಮಂಡಳಿಯು ಪರೀಕ್ಷಾ ನಿಯಮಗಳನ್ನು ಮತ್ತು ಮಾರ್ಗಸೂಚಿಗಳ ಪ್ರಕಾರ ಡಿಪ್ಲೋಮಾ ಪರೀಕ್ಷೆಗಳನ್ನು ನಡೆಸಲಾಗುವದು.