ಪರೀಕ್ಷಾ ವಿಭಾಗ

ತಾಂತ್ರಿಕ ಪರೀಕ್ಷಾ ಮಂಡಳಿ ಬೆಂಗಳೂರು ಇವರ ಅಧಿಸೂಚನೆಯನ್ವಯ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆಗಳನ್ನು ಪ್ರತಿ ವರ್ಷ 02 ಅವಧಿಗಳಲ್ಲಿ ನಡೆಸಲಾಗುವುದು. ವರ್ಷದ ಮೊದಲ ಅವಧಿಯಲ್ಲಿ 1 , 3 ಮತ್ತು 5ನೇ ಸೆಮಿಸ್ಟರ್ನ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಪರೀಕ್ಷೆಯನ್ನೂ ಮತ್ತು 2, 4 ಮತ್ತು 6ನೇ ಸೆಮಿಸ್ಟರ್ನ ಅನುತ್ತೀರ್ಣ ವಿಷಯಗಳಿಗೆ ಭಾಗಶಃ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಪರೀಕ್ಷೆಗಳು ಪ್ರತಿವರ್ಷ ನವಂಬರ್/ಡಿಸೆಂಬರ್ ತಿಂಗಳಿನಲ್ಲಿ ನಡೆಯುತ್ತವೆ.

ಎರಡನೇ ಅವಧಿಯಲ್ಲಿ 2 , 4 ಮತ್ತು 6ನೇ ಸೆಮಿಸ್ಟರ್ನ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಪರೀಕ್ಷೆಯನ್ನೂ ಮತ್ತು 1, 3 ಮತ್ತು 5ನೇ ಸೆಮಿಸ್ಟರ್ನ ಅನುತ್ತೀರ್ಣ ವಿಷಯಗಳಿಗೆ ಭಾಗಶಃ ಪರೀಕ್ಷೆಗಳನ್ನು ನಡೆಸಲಾಗುವುದು.. ಈ ಪರೀಕ್ಷೆಗಳು ಪ್ರತಿವರ್ಷ ಏಪ್ರೀಲ್/ಮೇ ತಿಂಗಳಿನಲ್ಲಿ ನಡೆಯುತ್ತವೆ.


ಪೂರ್ಣ ಪರೀಕ್ಷಾ ಶುಲ್ಕ (ರೆಗ್ಯುಲರ್ ವಿದ್ಯಾರ್ಥಿಗಳಿಗೆ)
ಕ್ರ.ಸಂ/td> ವಿದ್ಯಾರ್ಥಿಗಳ ಪ್ರವರ್ಗ ಶುಲ್ಕ ರೂ.
01 ಪ.ಜಾ/ಪ.ಪಂ ಮತ್ತು ಪ್ರವರ್ಗ-1 ವಿದ್ಯಾರ್ಥಿಗಳಿಗೆ 50 / -
02 ವಾರ್ಷಿಕ ವರಮಾನ ರೂ. 1 ಲಕ್ಷಕ್ಕಿಂತ ಕಡಿಮೆ ಇರುವ 2ಎ, 3ಎ, 3ಬಿ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 50 / -
03 ಪ್ರವರ್ಗ 2ಬಿ 350 / -

ಅನುತ್ತೀರ್ಣ ವಿಷಯಗಳ ಪರೀಕ್ಷಾ ಶುಲ್ಕ
ಕ್ರ.ಸಂ ವಿಷಯಗಳು ಸೆಮಿಸ್ಟರ್ವಾರು ವಿದ್ಯಾರ್ಥಿಗಳ ಪ್ರವರ್ಗ ಶುಲ್ಕ ರೂ.
01 ಗರಿಷ್ಟ 06 ವಿಷಯಗಳು ಪ.ಜಾ/ಪ.ಪಂ ಮತ್ತು ಪ್ರವರ್ಗ -1 ವಿದ್ಯಾರ್ಥಿಗಳಿಗೆ 50 / -
02 1 ಅಥವಾ 2 ವಿಷಯಗಳಿಗೆ ಪ್ರವರ್ಗ 2ಎ, 2ಬಿ 3ಎ, 3ಬಿ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 250 / -
03 3 ಅಥವಾ ಹೆಚ್ಚು 350 / -
ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆಯ ಛಾಯಾ ಪ್ರತಿ ಶುಲ್ಕ
  1. ಮರುಮೌಲ್ಯಮಾಪನ ಶುಲ್ಕ ಪ್ರತಿ ವಿಷಯಕ್ಕೆ ರೂ. 550/- (ಎಲ್ಲ ಪ್ರವರ್ಗದ ವಿದ್ಯಾರ್ಥಿಗಳಿಗೆ ಪ.ಜಾ/ಪ.ಪಂ ವಿದ್ಯಾರ್ಥಿಗಳನ್ನೊಳಗೊಂಡು)
  2. ಉತ್ತರ ಪತ್ರಿಕೆಯ ಛಾಯಾ ಪ್ರತಿ ವಿಷಯಕ್ಕೆ ರೂ. 250/- (ಎಲ್ಲ ಪ್ರವರ್ಗದ ವಿದ್ಯಾರ್ಥಿಗಳಿಗೆ ಪ.ಜಾ/ಪ.ಪಂ ವಿದ್ಯಾರ್ಥಿಗಳನ್ನೊಳಗೊಂಡು)
ಅಂಕಪಟ್ಟಿಯ ದ್ವಿಪ್ರತಿ (Duplicate Marks Card) ಶುಲ್ಕ

ತಾಂತ್ರಿಕ ಪರೀಕ್ಷಾ ಮಂಡಳಿ ಬೆಂಗಳೂರು ಇವರಿಂದ ನಕಲು ಅಂಕಪಟ್ಟಿಗಳನ್ನು ಪಡೆಯಲು, ಮಂಡಳಿಯು ನಿಗದಿ ಪಡಿಸಿರುವ ಶುಲ್ಕ ರೂ. 400/- (ಪ್ರತಿ ಅಂಕಪಟ್ಟಿಗೆ) ಪಾವತಿಸಿ ಈ ಕೆಳಕಂಡ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

  1. ಅಭ್ಯರ್ಥಿಯ ಅರ್ಜಿ
  2. ಪೊಲೀಸ್ ವರದಿ
  3. ನೋಟರಿಯವರ ಸಹಿಯೊಂದಿಗೆ ಪಡೆದ ಅಫಿಡವಿಟ್
  4. ಖಜಾನೆ -2 ಮೂಲಕ ಶುಲ್ಕ ಪಾವತಿಸಿದ ಚಲನ್ ಪ್ರತಿ
ಡಿಪ್ಲೋಮಾ ಪದವಿ ಪ್ರಮಾಣ ಪತ್ರ

1 ರಿಂದ 6ನೇ ಸೆಮಿಸ್ಟರ್ಗಳಲ್ಲಿ ಯಾವುದೇ ಬಾಕಿ ವಿಷಯಗಳನ್ನು ಉಳಿಸಿಕೊಳ್ಳದೇ ಉತ್ತೀರ್ಣರಾಗುವ ಅರ್ಹ ಅಭ್ಯರ್ಥಿಗಳಿಗೆ ಡಿಪ್ಲೋಮಾ ಪದವಿ ಪ್ರಮಾಣ ಪತ್ರವನ್ನು ನೀಡಲಾಗುವುದು. ತಾಂತ್ರಿಕ ಪರೀಕ್ಷಾ ಮಂಡಳಿ ಬೆಂಗಳೂರು ಇವರಿಂದ ಡಿಪ್ಲೋಮಾ ಪದವಿ ಪ್ರಮಾಣ ಪತ್ರವನ್ನು ಪಡೆಯಲು ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಬಹುದಾಗಿದೆ.

  1. ಅಭ್ಯರ್ಥಿಯ ಅರ್ಜಿ.
  2. 1 ರಿಂದ 6ನೇ ಸೆಮಿಸ್ಟರ್ನ ದೃಢೀಕೃತ ಜೆರಾಕ್ಸ್ ಅಂಕಪಟ್ಟಿಗಳು.
  3. ಪಾಸ್ ಪೋರ್ಟ ಸೈಜ್ನ 04 ಭಾವಚಿತ್ರಗಳು.

ಡಿಪ್ಲೋಮಾ ಪದವಿ ಪ್ರಮಾಣ ಪತ್ರವನ್ನು ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ ಸಕಾಲ ವ್ಯವಸ್ಥೆಯಲ್ಲಿ ತ್ವರಿತವಾಗಿ ಮತ್ತು ಉಚಿತವಾಗಿ ನೀಡಲಾಗುವುದು.