ದೂರಸಂಪರ್ಕ ವಿಭಾಗ

ದೂರಸಂಪರ್ಕ ವಿಭಾಗವು ವಿದ್ಯುನ್ಮಾನ ಉಪಕರಣಗಳ ಮತ್ತು ಅವುಗಳಿಗೆ ಅಗತ್ಯವಾದ ತಂತ್ರಾಂಶಗಳ ಮಾಹಿತಿಯ ಬಳಕೆಯನ್ನು ಒಳಗೊಂಡಿರುತ್ತದೆ. ವಿದ್ಯುನ್ಮಾನ ಉಪಕರಣಗಳನ್ನು ಮಾಹಿತಿ ತಂತ್ರಜ್ಞಾನಕ್ಕೆ ಸಂಪರ್ಕಿಸುವ ಕೊಂಡಿಯಾಗಿರುತ್ತದೆ.

ವಿಸ್ತಾರ (Scope)
  • ದೂರಸಂಪರ್ಕ ವಿಭಾಗವು ಗಣಕಯಂತ್ರದ ಮತ್ತು ಮಾಹಿತಿ ತಂತ್ರಜ್ಞಾನದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ. ಗಣಕಯಂತ್ರ ವಿಭಾಗ ಮತ್ತು ದೂರಸಂಪರ್ಕ ವಿಭಾಗ ಒಂದೇ ನಾಣ್ಯದ ಎರಡು ಮುಖಗಳು.
ದೂರದೃಷ್ಟಿ (Vision)
  • ವಿದ್ಯಾರ್ಥಿಗಳನ್ನು ದೂರಸಂಪರ್ಕ ಮತ್ತು ವಿದ್ಯುನ್ಮಾನ ಕೈಗಾರಿಕೆಗಳಿಗೆ ಬೇಕಾಗುವ ವೃತ್ತಿಪರ ಅತ್ಯುತ್ಕೃಷ್ಠ ಅಭಿಯಂತರರನ್ನಾಗಿ ಸಿದ್ಧಪಡಿಸುವುದು.
ಧ್ಯೇಯ (Mission)
  1. ದೂರಸಂಪರ್ಕ ಮತ್ತು ವಿದ್ಯುನ್ಮಾನ ಕೈಗಾರಿಕೆಗಳಿಗೆ ಬೇಕಾಗುವ ಅಭಿಯಂತರರನ್ನು ತಯಾರು ಮಾಡಲು ಬೇಕಾಗುವ ಕಲಿಕಾ ವಿಧಾನಗಳನ್ನು ಒದಗಿಸುವುದು.
  2. ಬದಲಾಗುತ್ತಿರುವ ತಂತ್ರಜ್ಞಾನದ ಸವಾಲುಗಳನ್ನು ಅರಿತುಕೊಳ್ಳುವ, ತಂಡದಲ್ಲಿ ಕಾರ್ಯನಿರ್ವಹಿಸುವ ಮತ್ತು ಉತ್ತಮ ಸಂವಹನ ಕಲೆ ಹೊಂದಿ ವೃತ್ತಿಯಲ್ಲಿ ಯಶಸ್ಸು ಹೊಂದುವ ವಾತಾವರಣದ ನಿರ್ಮಾಣ.
  3. ವೃತ್ತಿಯ ಆದರ್ಶಗಳನ್ನು ಮತ್ತು ಪರಿಸರ ಕಾಳಜಿಯನ್ನು ಹೊಂದಿ ಫಲಾನುಭವಿಗಳ/ಪಾಲುದಾರರ ಶ್ರೇಯೊಭಿವೃದ್ಧಿಗೆ ಶ್ರಮಿಸುವುದು.