ಗಣಕಯಂತ್ರ ವಿಭಾಗ

ಗಣಕಯಂತ್ರ ವಿಭಾಗವು ವಿನ್ಯಾಸ, ಗಣಕೀಕರಣ ಪ್ರಕ್ರಿಯೆ ಮತ್ತು ಗಣಕಯಂತ್ರ ಭಾಷೆಗಳ ಜ್ಞಾನವನ್ನು ಒಳಗೊಂಡಿದೆ. ಗಣಕಯಂತ್ರವು ಹಾರ್ಡವೇರ್ ಮತ್ತು ತಂತ್ರಾಂಶಗಳನ್ನು ಒಳಗೊಂಡಿದೆ. ತಂತ್ರಾಂಶವು ಹಾರ್ಡವೇರ್ನ ಆತ್ಮದಂತೆ ವರ್ತಿಸುತ್ತದೆ.

ವಿಸ್ತಾರ (Scope)
  • ನಮ್ಮ ಜೀವನವು ಶೇ 100 ರಷ್ಟು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಗಣಕಯಂತ್ರ ಎಲ್ಲ ಕ್ಷೇತ್ರಗಳಲ್ಲಿ ಬಳಕೆಯಾಗುತ್ತದೆ. ಉತ್ತಮ ಭವಿಷ್ಯಕ್ಕಾಗಿ ಗಣಕಯಂತ್ರವು ಅತೀ ಅವಶ್ಯವೆನಿಸಿದೆ. ವಿಶ್ವದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ನಮ್ಮ ದೇಶದ ಕೊಡುಗೆ ಅಪಾರ. ದೇಶದ ಅಭಿವೃದ್ದಿಗೆ ಅಗತ್ಯವಾದ ಮಾಹಿತಿ ತಂತ್ರಜ್ಞಾನ ಕೊಡುಗೆ ಅಪಾರವಾದದ್ದು. ನಮ್ಮ ದೇಶ ಡಿಜಿಟಲ್ ಭಾರತದತ್ತ ದಾಪುಗಾಲನ್ನು ಇಡುತ್ತಿದೆ.
ದೂರದೃಷ್ಟಿ (Vision)
  • ಉತ್ಕ್ರಷ್ಟ ಮೂಲಭೂತ ಸೌಕರ್ಯ ಮತ್ತು ಅತ್ಯುತ್ತಮ ಬೋಧಕ ಸಿಬ್ಬಂದಿಯೊಂದಿಗೆ ಗಣಕಯಂತ್ರ ವಿಭಾಗದಲ್ಲಿ ವಿಶ್ವ ಮಾನ್ಯತೆ ಪಡೆಯುವ ಶಿಕ್ಷಣ ನೀಡಿ ಸಮರ್ಥ ಮತ್ತು ಮೌಲ್ಯಾಧಾರಿತ ಗಣಕಯಂತ್ರ ಅಭಿಯಂತರರನ್ನು ಸೃಜಿಸುವುದು.
ಧ್ಯೇಯ (Mission)
  • ಗಣಕಯಂತ್ರದ ಮೂಲ ತತ್ವಗಳಿಗೆ ಒತ್ತು ನೀಡುವ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುವುದು.
  • ಬದಲಾಗುತ್ತಿರುವ ತಂತ್ರಜ್ಞಾನದ ಸವಾಲುಗಳನ್ನು ಅರಿತುಕೊಳ್ಳುವ, ತಂಡದಲ್ಲಿ ಕಾರ್ಯನಿರ್ವಹಿಸುವ ಮತ್ತು ಉತ್ತಮ ಸಂವಹನ ಕಲೆ ಹೊಂದಿ ವೃತ್ತಿಯಲ್ಲಿ ಯಶಸ್ಸು ಹೊಂದುವ ವಾತಾವರಣದ ನಿರ್ಮಾಣ.
  • ವೃತ್ತಿಯ ಆದರ್ಶಗಳನ್ನು ಮತ್ತು ಪರಿಸರ ಕಾಳಜಿಯನ್ನು ಹೊಂದಿ ಫಲಾನುಭವಿಗಳ/ಪಾಲುದಾರರ ಶ್ರೇಯೊಭಿವೃದ್ಧಿಗೆ ಶ್ರಮಿಸುವುದು.