ಕಾಮಗಾರಿ ವಿಭಾಗ

ಕಾಮಗಾರಿ ವಿಭಾಗವು ಅತ್ಯಂತ ಹಳೆಯ ಮತ್ತು ಸವಿಸ್ತಾರವಾದ ಇಂಜನೀಯರಿಂಗ್ ವಿಭಾಗಗಳಲ್ಲಿ ಒಂದಾಗಿರುತ್ತದೆ. ಈ ವಿಭಾಗವು ಯೋಜನೆ, ವಿನ್ಯಾಸ ಮತ್ತು ನಿರ್ಮಾಣ ಕಾಮಗಾರಿಯ ಮೇಲ್ವಿಚಾರಣೆಯನ್ನು ಒಳಗೊಂಡಿರುತ್ತದೆ. ಈ ವಿಭಾಗವು ಈಗ ಆಧುನಿಕ ತಂತ್ರಜ್ಞಾನಕ್ಕನುಗುಣವಾಗಿ ಅಂತರಿಕ್ಷ ಉಪಗ್ರಹ ಮತ್ತು ಉಡಾವಣೆ ಸೌಲಭ್ಯಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ. ಇವುಗಳೊಂದಿಗೆ ಮೂಲಭೂತ ಸೌಕರ್ಯಗಳಾದ ಕಟ್ಟಡ, ರಸ್ತೆ, ಆಣೆಕಟ್ಟು, ಹೆದ್ದಾರಿ, ಸುರಂಗ ಮಾರ್ಗ, ವಿಮಾನ ನಿಲ್ದಾಣ, ಬಂದರುಗಳ ನಿರ್ಮಾಣ ವಿವರಗಳನ್ನು ಹೊಂದಿರುತ್ತದೆ. ಶುದ್ಧ ನೀರಿನ ಸರಬರಾಜು ಮತ್ತು ಕೊಳಚೆ ನೀರಿನ ಪರಿಷ್ಕರಣೆಯನ್ನೂ ಒಳಗೊಂಡಿರುತ್ತದೆ.                         

ವಿಸ್ತಾರ (Scope)                         
                              
 • ಈ ವಿಭಾಗವು ಜನ ಸಾಮಾನ್ಯರಿಗೆ ಬೇಕಾಗುವ ಮೂಲ ಭೂತ ಸೌಕರ್ಯಗಳನ್ನು ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಬೇಕಾಗುವ ಸೌಕರ್ಯಗಳನ್ನು ಒದಗಿಸುವಷ್ಟು ವಿಸ್ತಾರವಾಗಿದೆ.                         
                         
ದೂರದೃಷ್ಟಿ (Vision)                         
                              
 • ವಿದ್ಯಾರ್ಥಿಗಳನ್ನು ವೃತ್ತಿಪರ ಯಶಸ್ವಿ ಸಿವಿಲ್ ಅಭಿಯಂತರರನ್ನಾಗಿ ಸಿದ್ಧಪಡಿಸುವುದು.                         
                        
ಧ್ಯೇಯ (Mission)                         
                              
 • ಕಾಮಗಾರಿ ಉದ್ಯಮದ ಅವಶ್ಯಕತೆಗಳನ್ನು ಪೂರೈಸುವ ಕಲಿಕಾ ವಿಧಾನಗಳನ್ನು ಒದಗಿಸುವುದು.                             
 • ಬದಲಾಗುತ್ತಿರುವ ತಂತ್ರಜ್ಞಾನದ ಸವಾಲುಗಳನ್ನು ಅರಿತುಕೊಳ್ಳುವ, ತಂಡದಲ್ಲಿ ಕಾರ್ಯನಿರ್ವಹಿಸುವ ಮತ್ತು ಉತ್ತಮ ಸಂವಹನ ಕಲೆ ಹೊಂದಿ ವೃತ್ತಿಯಲ್ಲಿ ಯಶಸ್ಸು ಹೊಂದುವ ವಾತಾವರಣದ ನಿರ್ಮಾಣ.                             
 • ವೃತ್ತಿಯ ಆದರ್ಶಗಳನ್ನು ಮತ್ತು ಪರಿಸರ ಕಾಳಜಿಯನ್ನು ಹೊಂದಿ ಫಲಾನುಭವಿಗಳ/ಪಾಲುದಾರರ ಶ್ರೇಯೊಭಿವೃದ್ಧಿಗೆ ಶ್ರಮಿಸುವುದು.