ಡಿಪ್ಲೋಮಾ ಪ್ರವೇಶ ವಿವರ

ಸರ್ಕಾರಿ ಪಾಲಿಟೆಕ್ನಿಕ್, ಗಜೇಂದ್ರಗಡ 2007-08ರಲ್ಲಿ ಸ್ಥಾಪನೆಯಾಗಿ, 2008-09ನೇ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಿರುತ್ತದೆ. ಸರ್ಕಾರದ ಆದೇಶದಂತೆ ಈ ಕೆಳಗಿನ 04 ಇಂಜನೀಯರಿಂಗ್ ಕೋರ್ಸುಗಳನ್ನು ಬೋಧಿಸಲಾಗುತ್ತದೆ.

ಈ ಕೋರ್ಸುಗಳಿಗೆ ಸರ್ಕಾರವು ಪ್ರವೇಶ ಸಂಖ್ಯೆಯನ್ನು ಈ ಕೆಳಗಿನಂತೆ ನಿಗದಿಪಡಿಸಿರುತ್ತದೆ.

ಕ್ರ.ಸಂ ಕೋರ್ಸುಗಳ ಹೆಸರು ಮಂಜೂರಾದ ಪ್ರವೇಶಾತಿ ಸಂಖ್ಯೆ ಬೋಧನಾ ಶುಲ್ಕ ರಹಿತ ಪ್ರವೇಶಾತಿ ಸಂಖ್ಯೆ ಒಟ್ಟು ಸಂಖ್ಯೆ
01 ಗಣಕಯಂತ್ರ ವಿಭಾಗ 60 03 63
02 ಕಾಮಗಾರಿ ವಿಭಾಗ 60 03 63
03 ದೂರಸಂಪರ್ಕ ವಿಭಾಗ 60 03 63
04 ಯಾಂತ್ರಿಕ ವಿಭಾಗ 60 03 63

ಮೂರು ವರ್ಷಗಳ ಡಿಪ್ಲೋಮಾ ಇಂಜನೀಯರಿಂಗ್ ಕೋರ್ಸಿನ ಪ್ರಥಮ ಸೆಮಿಸ್ಟರ್ಗೆ ಪ್ರವೇಶ ಪಡೆಯಲು ವಿದ್ಯಾರ್ಥಿಯು ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

 1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಟ ಶೇ 35 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
 2. 1ನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನಿಷ್ಟ 05 ವರ್ಷಗಳ ಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು.
 3. ಸಿ.ಬಿ.ಎಸ್.ಇ/ಐ.ಸಿ.ಎಸ್.ಇ ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳು ಮಾನ್ಯ ಕಾರ್ಯದರ್ಶಿಗಳು ತಾಂತ್ರಿಕ ಪರೀಕ್ಷಾ ಮಂಡಳಿ ಬೆಂಗಳೂರು ಇವರಿಂದ ಅರ್ಹತಾ ಪ್ರಮಾಣಪತ್ರವನ್ನು ಪಡೆದು ಪ್ರವೇಶದ ಸಮಯದಲ್ಲಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
 4. ವಿದ್ಯಾರ್ಥಿಯು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುವಾಗ ಅಗತ್ಯವಾದ ಎಲ್ಲ ಮೂಲ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.
 5. ಸರ್ಕಾರವು ಕಿರಿಯ ತಾಂತ್ರಿಕ ಶಾಲೆಯಿಂದ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳು ನಿಗದಿತ ಕೋರ್ಸುಗಳಿಗೆ ಪ್ರವೇಶ ಮೀಸಲಾತಿಯನ್ನು ಪ್ರತ್ಯೇಕವಾಗಿ ನಿಗದಿ ಪಡಿಸಿದೆ.
 6. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನಿಷ್ಟ 35 ಅಂಕಗಳನ್ನು ಪಡೆದು ಉತ್ತೀರ್ಣರಾದ ಕರ್ನಾಟಕದ ಅಭ್ಯರ್ಥಿಗಳು 1 ವರ್ಷದ ಐಟಿಐ ಪರೀಕ್ಷೆ ಪಾಸಾದಲ್ಲಿ ಕೆಲವು ಸಂಸ್ಥೆಗಳಲ್ಲಿ ಕೆಲವು ಕೋರ್ಸುಗಳಿಗೆ ಸರ್ಕಾರವು ಪ್ರತ್ಯೇಕ ಮೀಸಲಾತಿಯನ್ನು ಒದಗಿಸಿದೆ.

ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ /3ನೇ ಸೆಮಿಸ್ಟರ್ನ ಡಿಪ್ಲೋಮಾ ಕೋರ್ಸಿಗೆ ಪ್ರವೇಶ ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

 1. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 35 ಅಂಕ ಪಡೆದು ಉತ್ತೀರ್ಣರಾಗಿರಬೇಕು ಮತ್ತು 02 ವರ್ಷದ ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
 2. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ನವದೆಹಲಿ ಇವರು ಶೇ. 20ರಂತೆ ಪ್ರತಿ ಕೋರ್ಸಿಗೆ ಲ್ಯಾಟರಲ್ ಎಂಟ್ರಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು ನಿಗದಿಪಡಿಸಿರುತ್ತಾರೆ.

ಸದರಿ ವಿವರ ಈ ಕೆಳಗಿನಂತಿದೆ

ಕ್ರ.ಸಂ ಕೋರ್ಸುಗಳ ಹೆಸರು ಮಂಜೂರಾದ ಪ್ರವೇಶಾತಿ ಸಂಖ್ಯೆ
01 ಗಣಕಯಂತ್ರ ವಿಭಾಗ 12
02 ಕಾಮಗಾರಿ ವಿಭಾಗ 12
03 ದೂರಸಂಪರ್ಕ ವಿಭಾಗ 12
04 ಯಾಂತ್ರಿಕ ವಿಭಾಗ 12

ಮುಖ್ಯವಾದ ಸೂಚನೆ:

 1. ಡಿಪ್ಲೋಮಾ ಪ್ರಥಮ ಸೆಮಿಸ್ಟರ್ಗೆ ಮತ್ತು ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೋಮಾ 3ನೇ ಸೆಮಿಸ್ಟರ್ಗೆ ಪ್ರವೇಶ ಕುರಿತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಪ್ರತ್ಯೇಕ ಅಧಿಸೂಚನೆಯನ್ನು ಪ್ರತಿ ವರ್ಷ ಹೊರಡಿಸುತ್ತದೆ.
 2. ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಡಿಪ್ಲೋಮಾ ಪ್ರವೇಶದ ಮೇಲ್ವಿಚಾರಣೆ ಮತ್ತು ನಿಯಂತ್ರಣ ಹೊಂದಿರುತ್ತದೆ.
 3. ಪ್ರವೇಶದ ಮಾರ್ಗಸೂಚಿಗಳು/ ಅಧಿಸೂಚನೆಗಳು ಪ್ರತಿ ವರ್ಷ ಪರಿಷ್ಕ್ರತಗೊಳ್ಳುತ್ತವೆ.