ರಾಷ್ಟ್ರೀಯ ಮಾನ್ಯತೆ

ಮಾನ್ಯ ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರು ನಮ್ಮ ಸಂಸ್ಥೆಯನ್ನು ರಾಷ್ಟ್ರೀಯ ಮಾನ್ಯತಾ ಮಂಡಳಿ ನವದೆಹಲಿ ಇವರಿಂದ ಮಾನ್ಯತೆ ಪಡೆಯಲು ಆಯ್ಕೆ ಮಾಡಿರುವುದನ್ನು ತಿಳಿಸಲು ಹೆಮ್ಮೆಯೆನಿಸುತ್ತದೆ. ಈಗಾಗಲೇ ರಾಷ್ಟ್ರೀಯ ಮಾನ್ಯತಾ ಮಂಡಳಿಯ ವೆಬ್ ಪೋರ್ಟಲ್ನಲ್ಲಿ ಅಗತ್ಯ ದಾಖಲೆಗಳನ್ನು ಅಪಲೋಡ್ ಮಾಡಿ ನೋಂದಣಿ ಮಾಡಿಕೊಳ್ಳಲಾಗಿದೆ.

ಈ ಪ್ರಕ್ರಿಯೆಯ ಅಂಗವಾಗಿ ನಮ್ಮ ಸಂಸ್ಥೆಯಲ್ಲಿ ರಾಜ್ಯದ ಪಾಲಿಟೆಕ್ನಿಕ್ ಮತ್ತು ಇಂಜನೀಯರಿಂಗ್ ಕಾಲೇಜುಗಳ ಉಪನ್ಯಾಸಕರುಗಳಿಗೆ ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಕೇಂದ್ರ ಚಂಡೀಘಡ ಇವರ ಸಹಯೋಗದೊಂದಿಗೆ “ರಾಷ್ಟ್ರೀಯ ಮಾನ್ಯತೆ ಮತ್ತು ನಿರ್ವಹಣೆ” ಕುರಿತು ಐದು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರ ತಾಂತ್ರಿಕ ನಿರ್ದೇಶನಾಲಯದ ಟೆಕ್ವಿಪ್ ಹಂತ-2ರ ಅಡಿಯಲ್ಲಿ ನೆರವೇರಿಸಲಾಯಿತು. ಗದಗ ಮತ್ತು ಕೊಪ್ಪಳ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ಗಳ ಪ್ರಾಚಾರ್ಯರು ಮತ್ತು ಸಂಯೋಜನಾಧಿಕಾರಿಗಳು ರಾಷ್ಟ್ರೀಯ ಮಾನ್ಯತೆ ಕುರಿತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಎನ್.ಬಿ.ಎ. ಘಟಕ ಸಹಯೋಗದಲ್ಲಿ ಎರಡು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಮೇಲಿನ ಎರಡು ಕಾರ್ಯಾಗಾರಗಳು ಅತ್ಯಂತ ಯಶಸ್ವಿಯಾಗಿವೆಯೆಂದು ತಿಳಿಸಲು ಹೆಮ್ಮೆಯೆನಿಸುತ್ತದೆ.