ಪ್ರವೇಶ ವಿಭಾಗ


ಮೊದಲನೆಯ ಸೆಮಿಸ್ಟರ್ಗೆ /ವರ್ಷದ ಪ್ರವೇಶದ ವಿವರ

ಮೂರು ವರ್ಷಗಳ ಡಿಪ್ಲೋಮಾ ಇಂಜನೀಯರಿಂಗ್ ಕೋರ್ಸಗಳ ಪ್ರಥಮ ಸೆಮಿಸ್ಟರ್ಗೆ ಪ್ರವೇಶ ಪಡೆಯಲು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ರಾಜ್ಯದ 122 ನೋಡಲ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರ ಪ್ರವೇಶ ಅಧಿಸೂಚನೆಯನ್ವಯ ನಿಗದಿತ ದಿನಾಂಕಗಳಂದು 23 ನೋಡಲ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ.


ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರು ಪ್ರತಿವರ್ಷ ಪ್ರವೇಶ ಪ್ರಕ್ರಿಯೆಯ ಅಧಿಸೂಚನೆಯನ್ನು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗುವ ಮೊದಲು ಇಲ್ಲವೇ ಮೇ ತಿಂಗಳ ಮೊದಲ ವಾರದಲ್ಲಿ ಹೊರಡಿಸುತ್ತಾರೆ

ಆನ್ಲೈನ್ ಪ್ರವೇಶ ಪ್ರಕ್ರಿಯೆ ಮುಗಿದ ಕೂಡಲೇ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ಸೀಟುಗಳ ಲಭ್ಯತೆಗೆ ಅನುಗುಣವಾಗಿ ಸಂಸ್ಥೆಯ ಮಟ್ಟದಲ್ಲಿ ಆಫ್ಲೈನ್ ಪ್ರವೇಶ ಪ್ರಕ್ರಿಯೆ ನಡೆಸಲಾಗುವುದು.


ಈ ಕೆಳಕಂಡ ಕೋರ್ಸುಗಳಿಗೆ ಪ್ರವೇಶಾತಿ ಸಂಖ್ಯೆಯ ಮಾಹಿತಿ ಈ ಕೆಳಗಿನಂತಿದೆ.
ಕ್ರಂ ಸಂ ಕೋರ್ಸ್ ಹೆಸರು ಪ್ರವೇಶಾತಿ ಸಂಖ್ಯೆ ಸಂಖ್ಯಾಧಿಕ ಸೀಟುಗಳು/ಬೋಧನಾ ಶುಲ್ಕ ರಹಿತ
01 ಗಣಕಯಂತ್ರ ವಿಭಾಗ 60 03
02 ಕಾಮಗಾರಿ ವಿಭಾಗ 60 03
03 ದೂರಸಂಪರ್ಕ ವಿಭಾಗ 60 03
04 ಯಾಂತ್ರಿಕ ವಿಭಾಗ 60 03

ಐಟಿಐ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶದ ವಿವರ

ಎಐಸಿಟಿಇ ನವದೆಹಲಿ ಇವರ ಮಾರ್ಗಸೂಚಿಯ ಅನುಸಾರ ವಿವಿಧ ಟ್ರೆಡ್ಗಳಲ್ಲಿ 02 ವರ್ಷಗಳ ಐಟಿಐ ಕೋರ್ಸು ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳಿಗೆ ನೇರವಾಗಿ ಲ್ಯಾಟರಲ್ ಎಂಟ್ರಿ ಮೂಲಕ 3ನೇ ಸೆಮಿಸ್ಟರ್ಗೆ ಪ್ರವೇಶ ನೀಡಲಾಗುವುದು. ಶೇ 20 ರಷ್ಟು ಸೀಟುಗಳನ್ನು ಲ್ಯಾಟರಲ್ ಎಂಟ್ರಿ ಪ್ರವೇಶಕ್ಕೆ ಕಾಯ್ದಿರಿಸಲಾಗಿದೆ.

ಈ ಕೆಳಕಂಡ ಕೋರ್ಸುಗಳಿಗೆ ಲ್ಯಾಟರಲ್ ಎಂಟ್ರಿ ಪ್ರವೇಶಾತಿ ಸಂಖ್ಯೆಯ ಮಾಹಿತಿ ಈ ಕೆಳಗಿನಂತಿದೆ.
ಕ್ರಂ ಸಂ ಕೋರ್ಸ್ ಹೆಸರು ಪ್ರವೇಶಾತಿ ಸಂಖ್ಯೆ
01 ಗಣಕಯಂತ್ರ ವಿಭಾಗ 12
02 ಕಾಮಗಾರಿ ವಿಭಾಗ 12
03 ದೂರಸಂಪರ್ಕ ವಿಭಾಗ 12
04 ಯಾಂತ್ರಿಕ ವಿಭಾಗ 12

ಪ್ರವೇಶ ಶುಲ್ಕದ ವಿವರ
ಕ್ರಂ ಸಂ ಶುಲ್ಕದ ವಿವರ ಶುಲ್ಕದ ರೂ.
01 ಪ್ರವೇಶ ಶುಲ್ಕ 30 / -
02 ಬೋಧನಾ ಶುಲ್ಕ 2940 / -
03 ಪ್ರಯೋಗಾಲಯ ಶುಲ್ಕ 300 / -
04 ಕ್ರೀಡಾ ಶುಲ್ಕ 70 / -
05 ಗುರುತಿನ ಚೀಟಿ ಶುಲ್ಕ 10 / -
06 ಮ್ಯಾಗಜೀನ್ ಶುಲ್ಕ 60 / -
07 ಗ್ರಂಥಾಲಯ ಠೇವಣಿ 150 / -
08 ವಿದ್ಯಾರ್ಥಿ ಸಂಘ ಶುಲ್ಕ 60 / -
09 ವಾಚನಾಲಯ ಶುಲ್ಕ 100 / -
10 ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಶುಲ್ಕ 25 / -
11 ಶಿಕ್ಷಕರ ಕ್ಷೇಮಾಭಿವೃದ್ಧಿ ಶುಲ್ಕ 25 / -
12 ಅಭಿವೃದ್ಧಿ ಶುಲ್ಕ 500 / -
ಒಟ್ಟು ಮೊತ್ತ 4270 / -

ಪ್ರವೇಶ ಶುಲ್ಕ ವಿನಾಯತಿ
  1. ಪ.ಜಾ/ಪ.ಪಂ ಮತ್ತು ಹಿಂದುಳಿದ ವರ್ಗಗಳಾದ ಪ್ರವರ್ಗ 1, 2ಎ,3ಎ ಮತ್ತು 3ಬಿ ಮತ್ತು ಸಾಮಾನ್ಯ ಪ್ರವರ್ಗಗಗಳ 01 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ವಿದ್ಯಾರ್ಥಿಗಳಿಗೆ ಮೇಲಿನ ಪ್ರವೇಶ ಶುಲ್ಕಗಳಲ್ಲಿ ವಿನಾಯಿತಿ ಇರುತ್ತದೆ.
  2. ಮೇಲೆ ತಿಳಿಸಿದ ಶುಲ್ಕಗಳು ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶಗಳಿಗೆ ತಕ್ಕಂತೆ ಬದಲಾವಣೆ ಆಗುತ್ತಿರುತ್ತವೆ.